ಗಂಗೆ ಭಾಗೀರಥಿ ಮಂಗಳಾಂಗಿ

ಗಂಗೆ ಭಾಗೀರಥಿ ಮಂಗಳಾಂಗಿ ಅಲಕನಂದನೆ ನೀ ಮಹಾ ಸುಂದರಾಂಗಿ ll ಪ ll

ಸಿಂಧು ರಾಜನ ರಾಣಿ ಸಿರಿಯ ಸಂಪತ್ತು ಕೊಡು l ಕಂಗಳಿಂದಲಿ ನೋಡಿ ಕರುಣಿಸೆಮ್ಮ ll ಅ. ಪ ll ಕಾಶಿಪಟ್ಟಣದಲ್ಲಿ ವಾಸವಾಗಿ l ಸರಸ್ವತಿಯನ್ನು ಕೂಡಿ ನೀ ಸರಸವಾಗಿ l ಸೋಸಿಲಿಂದಲಿ ಸೂರ್ಯ ಪುತ್ರಿಯ ಕೂಡಿ ಉಲ್ಲಾಸ ದಿನ್ದಹರಿದು ವಾರಣಾ ಸಿಗ್ಹೋಗಿ ll 1 ll

ಹಾಲಿನಂತೆ ಹರಿವೊ ಗಂಗೆ ನೀನು l ನೀಲದಂತಿದ್ದ ಯಮುನೆಯನು ಕೂಡಿ ll ಲೀಲೆಯಿಂದಲಿ ಸರಸ್ವತಿಯನ್ನು ಕೂಡಿ l ಓಲ್ಯಾಡುತ ಬಂದೆ ವೈಯಾರ ದಿಂದ ll 2 ll

ಭಗೀರಥನ ಹಿಂದೆ ನೀ ಓಡಿ ಬಂದೆ l ಸಗರನ ಸುತರ ಉದ್ದಾರ ಮಾಡಿ ll ಜಗವ ಪಾವನ ಮಾಡೋ ಜಾನ್ಹವಿಯೇ ನೀ l ಎನ್ನ ಮಗುವೆಂದು ಮುಂದಕ್ಕೆ ಕರಿಯೇ ತಾಯೆ ll 3 ll

ಬಿಂದು ಮಾಧವ ವೇಣು ಮಾಧವನ್ನ l ಆನಂದ ಭೈರವ ಕಾಳ ಭೈರವನ್ನ l ಚೆಂದದಿಂ ವಿಶ್ವನಾಥನಗುಡಿ ಮುಂದೆ l ಹೊಂದಿ ಹರಿದು ಹನುಮಂತ ಘಾಟಿನಿಂದೆ ll 4 ll

ದಡದಡನೆ ಬಂದು ದಡಗಳನೆ ಕೊರೆದು l ಪೊಡವಿಯ ಮೇಲೆ ಇಂಥ ಸಡಗರದಿ ಹರಿದು ಕಡಲಶಯನನ ಕಾಲ ಅಂಗುಷ್ಠದ ಮಗಳು l ಕಡಲ ರಾಣಿಯೇ ಕೈಯ ಪಿಡಿಯೇ ನೀನು ll 5 ll

ಮೊರದ ಬಾಗಿಣ ಕುಂಕುಮ ಅರಿಶಿನವು ಗಂಧ l ಪರಿಪರಿಯಿಂದ ಪೂಜೆಯ ಗೊಂಬುವಿ l ಸ್ಥಿರವಾದ ಮುತೈದೆತನ ವರವ l ಜನುಮ ಜನುಮಕು ಕೊಟ್ಟು ವೈಕುಂಠವನು ತೋರಿಸೆ ll 6 ll

ಮದ್ಯಾನ್ಹದಲಿ ಮಣಿಕರ್ಣಿಕೆಯ ಸ್ನಾನ l ಶುದ್ಧ ವಾದ ಪಂಚ ಗಂಗೆಯಲಿ l ಅಸ್ಥಿರ ದೇಹವ ಪವಿತ್ರ ವನು ಮಾಡಿ l ಭವ ಸಮುದ್ರವನು ಧಾಟಿಸೆ ಭಾಗೀರಥಿ ll7ll

ಎಷ್ಟು ಜನ್ಮದ ಸುಕೃತ ವೊದಗಿತಿಂದು l ಗಂಗೆ ಭೆಟ್ಟಿಯಾಗೋ ಪುಣ್ಯ ಬಂದಿತಿಂದು l ಚಕ್ರ ತೀರ್ಥ ಸ್ನಾನ ಸಂಕಲ್ಪದ ಫಲವ ಕೊಟ್ಟು l ರಕ್ಷಿಸೇ ತಾಯೇ ತರಂಗಿಣಿ ll 8 ll

ಸಾಸಿರ ಮುಖದಿ ಶರಧಿಯನು ಕೂಡಿ l ಹೋಗಿ ಬಾ ಊರಿಗೆ ಭಕ್ತಿ ಮುಕ್ತಿ ನೀಡಿ l ನೀನು ಭೀಮೇಶ ಕೃಷ್ಣನಲಿ ಹುಟ್ಟಿದ ಪಾದವನ್ನು ತೊರೆನ್ನ ಪೊರೆಯಬೇಕ ll 9 ll

********

Leave a Reply

Your email address will not be published. Required fields are marked *