Categories
Ganga Devi

Jaya janhavidevi jayabhakutha sanjeevi

ಜಯ ಜಾನ್ಹವೀ ದೇವಿ ಜಯ ಭಕುತ ಸಂಜೀವಿ ಜಯ ಪ್ರದಾಯಕವೀವೆ ಜಯ ಎಮ್ಮ ಕಾವೇ ll

ಅಜನ ಸಭೆಯಲಿ ವರುಣಂಗೆ ಶಾಪವು ಬರಲು ಪ್ರಜಾಪಾಲನಾದ ಶಂತನು ನಾಮದಿ ll ನಿಜರೂಪದಲಿ ಬಂದು ಅಷ್ಟವಸುಗಳ ಪಡೆದೆ ಭಜಿಸ ಬಲ್ಲನೆ ನಿನ್ನ ಬಹು ಭಾಗ್ಯವಂತೆ ll1 ll

ಭಾಗೀರಥಗೆ ವೊಲಿದು ಭವದೂರ ಪಾವನಕಾರೆ ಸಗರ ರಾಯನ ವಂಶ ಉದ್ದಾರೆ ll ಅಗಣಿತೋದಯ ಪಾರಂವಾರೇ ಶುಭಶರೀರೆ ಮುಗಿವೆನು ಕರವೇತ್ತಿ ಸಂತತ ವಾರಂವಾರೇ ll2ll

ಏನು ಧನ್ಯರೋ ಎನ್ನ ಕುಲಕ ಪಾವನೆ ಯೆನಲು ನೀನಬ್ದಿ ಪೊರೆದೆ ಉತ್ಸಾಹದಿ ಮೆರೆದೆ ll ಮಾನನಿಧಿ ವಿಜಯ ವಿಠ್ಠಲನ ಸನ್ನಿಧಿಯಲ್ಲಿ ಜ್ಞಾನ ಪೂರ್ವಕ ಒಲಿದು ಭಕುತಿ ಕೊಡು ಎನಗೆ ll3ll

*****

Categories
Tulasi

Elamma Sri Tulasi

ಏಳಮ್ಮ ಶ್ರೀ ತುಳಸಿ lಪl

ಏಳಮ್ಮ ಶ್ರೀ ತುಳಸಿ ಕೋಮಲ ವೇಣಿ ನೀಲಾ ವರ್ಣನ ರಾಣಿ ನಿತ್ಯ ಕಲ್ಯಾಣಿ ll ಅ. ಪ.ll

ಏಳುತಲೆದ್ದು ಶ್ರೀ ತುಳಸಿಗೆ ಕೈ ಮುಗಿದು ಏಳು ಪ್ರದಕ್ಷಿಣೆ ಹಾಕುತಲಿ l ಏಳು ಜನ್ಮದ ಪಾಪ ಕಳೆವಂಥ ತಾಯ ನೀ ll 2 ll

ಉಟ್ಟ ಪೀತಾಂಬರ ಹೃದಯದೊಳ್ ಕೌಸ್ತುಭ ತೊಟ್ಟ ಮುತ್ತಿನ ಅಂಗಿ ಲಕ್ಷ್ಮೀ ರಮಣ ತೊಟ್ಟ ಮುತ್ತಿನ ಅಂಗಿ ಲಕ್ಷ್ಮೀರಮಣನು ನಿನಗೊಪ್ಪಿದನಲ್ಲೇ ಶ್ರೀ ತುಳಸಿ ll2ll

ಎಡದ ಕೈಯಲ್ಲಿ ಶಂಖ ಬಲದ ಕೈಯಲ್ಲಿ ಚಕ್ರ ಎಡ ಬಲಕೊಪ್ಪುವ ಛತ್ರ ಚಾಮರವು l ಮುಡಿದಾ ಮಲ್ಲಿಗೆ ಹೂ ಮುಡಿಯಿಂದ ಉದುರುತ್ತಾ ಒಡೆಯ ಶ್ರೀ ಪುರಂದರ ವಿಠಲನ ರಾಣಿ ll3ll

Categories
Tulasi

Kusuma dalakshi

ಕುಸುಮ ದಳಾಕ್ಷಿಯೇ ಬಿಸರುಹ ನೇತ್ರೆಯೇl ಅಸುರಹರನ ಪ್ರಿಯೇ ಬಾ ತುಳಸಿ llಪ ll

ವಸುದೇವ ಕಂದನ ವಾಸುಕಿ ಶಯನನ ಕುಶಲದಿ ಕರೆತಾ ನೀ ನೊಲಿಸಿ ll ಅ. ಪ. ll

ಶಂಖ ಚಕ್ರ ಧರ ಶ್ರೀ ಗೋವಿಂದನ ಬಿಂಕದ ಮಡದಿಯೆ ಬಾ ತುಳಸಿ l ಶಂಕರ ಪ್ರಮುಖಾದ್ಯಮರರು ನಿನ ಪದ ಪಂಕೇರುಹಗಳ ನಂಬಿಹರಮ್ಮ ll1ll

ನಾರದ ಸನ್ನುತೆ ನಾರಾಯಣ ಪ್ರಿಯೇ ಕಾರುಣ್ಯ ನಿಧಿಯೇ ಕಮಲಾಕ್ಷಿ ll ಸಾರ ಸೌಭಾಗ್ಯವ ಕರುಣಿಸು ತಾಯೆ ಘೋರ ಭವಾಂಬುದಿ ತಾರಿಸಿ ಕಾಯೆ ll 2 ll

ಬೃಂದಾವನವೇ ಮಂದಿರ ನಿನಗೆ ನಿಂದು ರಾಜಿಸು ಎನ್ನ ಅಂಗಳದಿ ll ಕಂದರ್ಪ ಜನಕ ಶ್ರೀ ನಾಗೇಶ ಶಯನನ ಪೊಂದಿ ಕೊಂಡಿರುವಂಥ ಸುಂದರ ತುಳಸಿ ll 3 ll

*****

Categories
General

Bhagavatgeeta Saara – by Vyasarajaru

llಹರೇ ಶ್ರೀನಿವಾಸll
llಶ್ರೀ ವ್ಯಾಸರಾಜರು ರಚಿಸಿದ ಶ್ರೀ ಭಗವದ್ಗೀತಾ ಸಾರll
ಕೇಳಯ್ಯ ಎನ್ನ ಮಾತು ಪಾರ್ಥನೆ ಗೀತಾದಾರ್ಥನೆll
ಕುರುಕ್ಷೇತ್ರದಿ ಎನ್ನವರು ಪಾಂಡವರುl
ಪೇಳೋ ಸಂಜಯ ಏನು ಮಾಡುವರು ಕೂಡಿ l
ಕೇಳಯ್ಯ ಅರಸನೆ ನೋಡಿ ಪಾಂಡವರ ಸೇನಾl
ಮಾತನಾಡಿದ ನಿನ್ನ ಸುತ ದ್ರೋಣ ಗಿಂತುll
ಕೇಳಿದ ಪಾರ್ಥನು ಕುರು ದಂಡ ರಣದಲಿ ಚಂಡ l
ಗಾಂಢೀವ ಕರದಂಡll ಅಚ್ಯುತ ಪಿಡಿ ರಥ ನಡೆ ಮುಂದೆl
ಬಹುತ್ವರದಿಂದl
ನೋಡುವೆ ನೇತ್ರದಿಂದll
ಗುರು ಹಿರಿಯ ಕೂಡ ಯಾಕೆಂದ l
ಯುದ್ಧ ಸಾಕೆಂದುl
ಭಿಕ್ಷವೇ ಸುಖವೆಂದ l
ಕುಂತಿ ಸುತ ಈ ಮಾತು ಉಚಿತಲ್ಲ l
ನಿನಗಿದು ಸಲ್ಲl ಪಿಡಿ ಗಾಂಡೀವ ಬಿಲ್ಲ
ll1ll

ಬಾಲ್ಯ ಯೌವನ ಮುಪ್ಪತನ ದೇಹದಲ್ಲಿl ಇಂಥ ದೇಹಕ್ಕೆ ಮೋಹ ಮತ್ಯಾಕಿಲ್ಲಿl ಕಾಯ್ದು ಕೊಲ್ಲುವ ನಾನು ಇರುತಿರಲು ಇಲ್ಲಿl ಬಿಲ್ಲು ಪಿಡಿದು ಕೀರ್ತಿ ಪಡೆ ಲೋಕದಲ್ಲಿ
ll ಶಸ್ತ್ರದಂಜಿಕೆಯಿಲ್ಲ ಜೀವಕ್ಕೆl ಈ ದೇಹಕ್ಕೆ l ಪಾವಕನ ದಾಹಕ್ಕೆlಉದಕಗಳಿಂದ ವೇದನೆಯಾಕೆ l ಜೀವಕ್ಕೆ ಮಾರುತನ ಶೋಷಕ್ಕೆ ನಿತ್ಯ ಅಭೇದ್ಯ ತಾ ಜೀವನ ಸನಾತನl ವಸ್ತ್ರ ದಾಂಗೆ ಈ ತನುವು ಆದಾವು ಹೋದವು ನಿನಗಯ್ಯ ನನಗಿಲ್ಲಯ್ಯ l ಅದನಾ ಬಲ್ಲೆನಯ್ಯಾ

ll 2 ll

ಜ್ಞಾನ ದೊಡ್ಡದು ಕರ್ಮ ಬಂಧನವ ಬಿಟ್ಟು ಕರ್ಮ ಬಿಟ್ಟರೆ ಪ್ರತ್ಯವಾಯವದೆಷ್ಟು l ಫಲ ಬಿಟ್ಟು ನೀ ಮಾಡು ಸತ್ಕರ್ಮಗಳ ಸಮ ದೇಹಕೆ ಫಲ ಕರ್ಮ ಕಾರಣವಲ್ಲll
ಕರ್ಮದಲ್ಲೇ ನಿನಗಧಿಕಾರ ಫಲ ತಾ ದೂರ l ಧನಂಜಯ ಗೋಸ್ಕರ l ಜ್ಞಾನ ದೊಡ್ಡದು ಕರ್ಮ ದೂರಯ್ಯ ಇತ್ತ ಬಾರಯ್ಯ l ಯೋಗಬುದ್ಧಿ ಮಾಡಯ್ಯ l ಜಿತ ಬುದ್ದಿ ಯಾವುದೈ ಕೇಶವ ಜಗತ್ಪಾಶವ l ನೋಡದೇ ಪರಮೇಶ ಗೋವಿಂದನಲಿ ಮನವಿಟ್ಟವ ಕಾಮ ಬಿಟ್ಟವ ಜಿತ ದೇಹ ತಾ ನಾದ

ll 3 ll

ಜ್ಞಾನ ದೊಡ್ಡದು ಕರ್ಮದಲ್ಯಾಕೆ ಎನ್ನ ಬುದ್ದಿ ಮೋಹಿಸಿ ಕೃಷ್ಣ ಕೇಳಯ್ಯ ಎನ್ನ ಬಿನ್ನಪ ll ಕರ್ಮ ವಿಲ್ಲದೆ ಮೋಕ್ಷ ಉಂಟೆ ಇನ್ನು ಕರ್ಮ ಮೋಕ್ಷದ ಬುದ್ಧಿಗೆ ಬೀಜ ವಲ್ಲೇ ll ಯುದ್ಧ ಕರ್ಮವ ಮಾಡೋ ಪಾಂಡವ ರಣ ತಾಂಡವ l ವೈರಿ ಷಂಡನೆಂಬುವ l ಜನರೆಲ್ಲ ಮಾಲ್ಪರೋ ನಿನ್ನ ನೋಡಿ l ಮತ್ತೆನ್ನ ನೋಡಿ l ನೋಡಿದರ ನೀ ಬೇಡಿ l ಏನಗ್ಯಾಕೆ ಪೇಳಯ್ಯ ಜನಕರ್ಮ ಕ್ಷತ್ರಿಯ ಧರ್ಮ l ನಷ್ಟವಾಗುವುದು ಧರ್ಮ l ಅರ್ಪಿಸು ಎನ್ನಲಿ ಸರ್ವವೂ ಬಿಟ್ಟು ಗರ್ವವು l ತಿಳಿ ಎನ್ನಲಿ ಸರ್ವವೂ

ll 4 ll

ಯೋಗ ಸನ್ಯಾಸ ಎರಡು ಮುಕ್ತಿಗೆ ಧೃಡವು l ಭೋಗವರ್ಜಿತ ಕೇಳು ಸನ್ಯಾಸಿ ಇರುವ l ಹೇಗೆ ಪದ್ಮಕೆ ವಾರಿಯ ಲೇಪವಿಲ್ಲ ಹಾಗೆ ಭಕ್ತಿಗೆ ಸಂಸ್ಕೃತಿಯು ಇಲ್ಲ ll
ಅಜನಲ್ಲಿ ದ್ವಿಜನಲ್ಲಿ ಗಜದಲ್ಲಿ ಸಮ ನಾನಲ್ಲಿ l ಭಜಿಪರ ಮನದಲ್ಲಿ ಮನಸ್ಸು ಯಾರ ಜೀವಕೆ ಬಂದು ಇತ್ತ ಬಾರೆಂದು l ಮತ್ತೆ ವೈರಿ ದಾರೆಂದು l ಲೊಷ್ಟ ಕಾಂಚನ ನೋಡು ಸಮ ಮಾಡಿ l ಆಸನ ಹೂಡಿ l ನಾಸಿಕ ತುದಿ ನೋಡಿ ಧ್ಯಾನ ಮಾಡು ಹರಿ ಅಲ್ಲಿಹ ಅವನಲ್ಲಿಹ l ಯೋಗ ಸನ್ನಿಹಿತನವನೇ

ll 5 ll

ಯಾರ ಭಕ್ತಿಯು ಎನ್ನ ಪಾದಾಬ್ಜದಲ್ಲಿ . ಘೋರ ಸಂಸಾರ ಯಾತನೆ ಅವರಿಗೆಲ್ಲಿl ಶರೀರವೇ ಕ್ಷೇತ್ರವೆಂದು ತಿಳಿಯೋ ಮರೆಯದೆ ಕ್ಷೇತ್ರಜ್ಞನೆಂದೆನ್ನ ತಿಳಿಯೋll
ಶರೀರದೊಳಗಿದ್ದು ಪಾಪಿಲ್ಲl ದುಃಖ ಲೇಪಿಲ್ಲ l ಆಕಾಶವು ಎಲ್ಲಾ l ಯಾತರಿಂದ್ಹುಟ್ಟಿತು ಈ ಗುಣ ಮೂರು ಸದ್ಗುಣl ಕೇಳಯ್ಯ ಪಲ್ಗುಣl ಸುಖ-ದುಃಖ ಸಮ ಮಾಡಿ ನೋಡು ನೀ l ಬ್ರಹ್ಮನ ನೋಡು ನೀ l ಸೂರ್ಯ-ಚಂದ್ರರ ತೇಜ ನನದಯ್ಯಾ ಗುಡಾಕೇಶಯ್ಯ l ಅನ್ನ ಪಚನ ನನ್ನದಯ್ಯಾ

ll6ll ll

ನಾನೇ ಉತ್ತಮ, ಮನಸ್ಸು ಎನ್ನಲಿ ಮಾಡೊ l ಜ್ಞಾನ ಅಜ್ಞಾನ ಪೇಳುವೆ ತಿಳಿದು ನೋಡೋ ಜ್ಞಾನ ದುರ್ಲಭ ಅವರ ಭಕ್ತಿ ಗಳಂತೆ ನಾನು ಕೊಡುವೆನು ಫಲವ ಮನಸ್ಸು ಬಂದಂತೆll
ಸ್ಮರಣೆ ಮಾಡುತ್ತ ದೇಹ ಬಿಡುವರೋ ನನ್ನ ಪಡೆವರೋ ಬಲು ಭಕ್ತಿ ಮಾಡುವರೋ ಅನಂತ ಚೇತನ ಸುಳಿವೆನು ಹರಿ ಸುಲಭನೋ l ಮತ್ತೆ ಜನನ ವಿಲ್ಲವಗೆ l ಎನ್ನ ಭಕ್ತರಿಗಿಲ್ಲ ನಾಶವು ಸ್ವರ್ಗದಾಶವು l ಬಿಟ್ಟು ಚರಣ ಭಕುತಿಯ

ll7 ll

ಕೃಷ್ಣ ತೋರಿಸು ನಿನ್ನ ವಿಭೂತಿ ರೂಪ l ಇಷ್ಟ ಪೂರ್ತಿಯಾಗಲು ಎನಗೆ ಶ್ರೀಪ l ರಾಮ ನಾನಯ್ಯ ರಾಜರ ಗುಂಪಿನಲ್ಲಿ l ಸೋಮ ನಾನಯ್ಯ ತಾರಕಮಂಡಲದಲಿ ll
ಅಕ್ಷರ ದೊಳಗೆ ಅ ಕಾರನು ಗುಣಸಾರನು l ಪಕ್ಷಿಗಳಲ್ಲಿ ನಾನು ಗರುಡನುl ಸಕಲ ಜಾತಿಗಳಲ್ಲಿ ಶ್ರೇಷ್ಟತನದಲ್ಲಿ l ಎನ್ನ ರೂಪ ತಿಳಿ ಅಲ್ಲಿ l ತೋರಿಸುವ ಶ್ರೀಕೃಷ್ಣ ನಿನ್ನ ರೂಪ l ಅರ್ಜುನ ನೋಡೋ ರೂಪ l ಕಂಡನು ತನ್ನನ್ನು ಸಹಿತದಿ ಹರಿ ದೇಹದಿ l ಬ್ರಹ್ಮಾಂಡಗಳಲ್ಲಿl

ll 8 ll

ಕ್ಷರ ಅಕ್ಷರ ಎರಡಕ್ಕೂ ಉತ್ತಮನು ನಾನು l ಘೋರ ನರಕದ ಲೋಭ ಕಾಮನು ನಾನು l ಸಾರ ದಾನವು ಸಜ್ಜನರ ಹಸ್ತದಲ್ಲಿ l ಭೂರಿ ದಕ್ಷಿಣೆ ನೀಡೋ ಸತ್ಪಾತ್ರರಲ್ಲಿll l
ಸರ್ವ ದಾನದಕ್ಕಿಂತ ಏನ ಭಕ್ತಿ ಕೇಳೋ ಭೂಶಕ್ತಿ l ಮಾಡಯ್ಯ ವಿರಕ್ತಿ l ಕೃಷ್ಣ ಹರಣವಾಯಿತು ನಿನ್ನಿಂದ ಮೋಹ ಎನ್ನಿಂದl ಬಹು ಸುವಾಕ್ಯದಿಂದ l ಕೃಷ್ಣಭೀಮಾನುಜರ ಸಂವಾದ ಮಹ ಸುಖಪ್ರದ l ದೃತರಾಷ್ಟ್ರ ಕೇಳಿದ l ಬಲ್ಲೆನೋ ವ್ಯಾಸರ ದಯದಿಂದ ಮನಸ್ಸಿನಿಂದ ಕೃಷ್ಣ ನಲ್ಲೆ ಜಯವೆಂದು

ll 9 ll

ll ಕೃಷ್ಣಾರ್ಪಣಮಸ್ತು ll