Categories
General

Sumadhwavijaya kannada kavya

ಸುಮಧ್ವವಿಜಯ ಕನ್ನಡಕಾವ್ಯದ ಮೊದಲನೇ ಸರ್ಗ
ಶ್ರೀ ಸುಮಧ್ವವಿಜಯ ಕನ್ನಡ ಕಾವ್ಯದ ಎರಡನೆಯ ಸರ್ಗ
ಶ್ರೀ ಸುಮಧ್ವವಿಜಯ ಕನ್ನಡ ಕಾವ್ಯದ ಮೂರನೇ ಸರ್ಗ
ಶ್ರೀ ಸುಮಧ್ವವಿಜಯ ಕನ್ನಡ ಕಾವ್ಯದ ನಾಲ್ಕನೆಯ ಸರ್ಗ
ಶ್ರೀ ಸುಮಧ್ವವಿಜಯ ಕನ್ನಡ ಕಾವ್ಯದ ಐದನೆಯ ಸರ್ಗ
ಶ್ರೀ ಸುಮಧ್ವವಿಜಯ ಕನ್ನಡಕಾವ್ಯ ಆರನೆಯ ಸರ್ಗ
ಶ್ರೀ ಸುಮಧ್ವವಿಜಯಕನ್ನಡಕಾವ್ಯದ ಏಳನೆಯ ಸರ್ಗ
ಸುಮಧ್ವವಿಜಯ ಕನ್ನಡ ಕಾವ್ಯದ ಎಂಟನೆಯ ಸರ್ಗ
ಸುಮಧ್ವವಿಜಯಕನ್ನಡ ಕಾವ್ಯದ ಒಂಬತ್ತನೇ ಸರ್ಗ
ಸುಮಧ್ವವಿಜಯಕನ್ನಡಕಾವ್ಯದ ಹತ್ತನೆಯ ಸರ್ಗ-1
ಶ್ರೀಸುಮಧ್ವವಿಜಯ ಕನ್ನಡಕಾವ್ಯದ ಹನ್ನೊಂದನೇ ಸರ್ಗ
ಶ್ರೀ-ಸುಮಧ್ವವಿಜಯ-ಕನ್ನಡ-ಕಾವ್ಯದ-ಹನ್ನೆರಡನೆಯ-ಸರ್ಗ
ಶ್ರೀ-ಸುಮಧ್ವವಿಜಯ-ಕನ್ನಡ-ಕಾವ್ಯದ-ಹದಿಮೂರನೆಯ-ಸರ್ಗ
ಶ್ರೀ-ಸುಮಧ್ವವಿಜಯ-ಕನ್ನಡ-ಕಾವ್ಯದ-ಹದಿನಾಲ್ಕನೇ-ಸರ್ಗ
ಶ್ರೀ-ಸುಮಧ್ವವಿಜಯ-ಕನ್ನಡ-ಕಾವ್ಯದ-ಹದಿನೈದನೆಯ-ಸರ್ಗ
ಶ್ರೀ-ಸುಮಧ್ವ-ವಿಜಯಕನ್ನಡ-ಕಾವ್ಯದ-ಹದಿನಾರನೆಯ-ಸರ್ಗ
Categories
General

Raamanaamava nene manave

ರಾಮನಾಮವ ನೆನೆ ಮನವೇ ll ಪ ll

ರಾಮ ಎಂದವನೆ ಧನ್ಯನೆಂದು ಶೃತಿತತಿಗಳು ಪೊಗಳುತಿರೆ ll ಅ. ಪ ll

ತರುಣತನದಿ ದಿನ ದಾಟಿತು ಸುಮ್ಮನೆ ಶರೀರದೊಳು ಸ್ವರವಾಡುತಲೇ ತರುಣಿ ಸುತರು ಸಂಸಾರವೆಂಬ ಶರಧಿಯೊಳಗೆ ಮುಳಗಿರದೆ ಮನವೇ ll 1 ll

ಬಗೆಬಗೆ ಜನ್ಮದಿ ಜನಿಸಿದೆ ನಾಳೆಗೆ ಸಿಗುವುದೇ ನಿಜದಿಂ ಈ ಸಮಯ ಮುಗುಧನಾಗಿ ಮತ್ತೆ ಜನಿಸಿ ಬರುವುದು ಸೊಗಸು ಕಾಣುವುದೇ ಛಿ ಮನವೇ ll 2 ll

ಚಿಂತೆಯನೆಲ್ಲ ಒತ್ತಟ್ಟಿಗಿತ್ತು ಅಂತರಂಗದಲಿ ಧ್ಯಾನಿಸುತ ಕಂತುಪಿತ ಕನಕಾದಿಕೇಶವನ ಎಂತಾದರೂ ನೀ ಬಿಡಬೇಡ ಮನವೇ ll3 ll

*****

Categories
General

Yelli nodidaralli raama

ಎಲ್ಲಿ ನೋಡಿದರಲ್ಲಿ ರಾಮ -ಇದ ಬಲ್ಲ ಜಾಣರ ದೇಹದಲಿ ನೋಡಣ್ಣ ll

ಕಣ್ಣೇ ಕಾಮನ ಬೀಜ -ಈ ಕಣ್ಣಿಂದಲೇ ನೋಡು ಮೋಕ್ಷ ಸಾಮ್ರಾಜ್ಯ ಕಣ್ಣಿನ ಮೂರುತಿ ಬಿಗಿದು -ಒಳ ಗಣ್ಣಿಇಂದಲೇನೆ ದೇವರ ನೋಡಣ್ಣ ll1 ll

ಮೂಗೆ ಶ್ವಾಸ ನಿಶ್ವಾಸ -ಈ ಮೂಗಿಂದಲೇ ಕಾಣೋ ಯೋಗ ಸಂನ್ಯಾಸ ಮೂಗನಾದರೆ ವಿಶೇಷ – ಒಳ ಮೂಗಲಿ ನೋಡಣ್ಣ ಲೀಲಾವಿಲಾಸ ll 2 ll

ಕಿವಿಯೇ ಕರ್ಮಕ್ಕೆ ದ್ವಾರ -ಈ ಕಿವಿಯಿಂದಲೇ ಕೇಳೋ ಮೋಕ್ಷದ ಸಾರ ಕಿವಿಯೇ ಕರ್ಮ ಕುಠಾರ -ಒಳ ಗಿವಿಯಲ್ಲಿ ಕಾಣೋ ನಾದದ ಬೇರ ll 3 ll

ಬೊಮ್ಮ ಮಾಡಿದ ತನುಬಿಟ್ಟು -ವಿಶ್ವ ಕರ್ಮನು ಮಾಡಿದ ಬೊಂಬೆಯನಿಟ್ಟು ಸುಮ್ಮನೆ ಕೂಗುಗಳಿಟ್ಟು – ಅದ ನಂಬುವನೆಂಬೋನು ಹೋಹ ಕಂಗೆಟ್ಟು ll4 ll

ರೂಢಿಯೊಳಗೆ ಶುದ್ಧ ಮೂಢ – ಈ ಕಾಡು ಕಲ್ಲುಗಳನ್ನು ನಂಬಲಿ ಬೇಡ ನಾಡಾಡಿ ದೈವಗಳನೆಲ್ಲ – ನಮ್ಮ ಬಡದಾದಿ ಕೇಶವನೊಬ್ಬನೇ ಬಲ್ಲ ll 5 ll

*****

Categories
General

Kaayabekamma sri thulasi

ಕಾಯಬೇಕಮ್ಮ ಶ್ರೀ ತುಳಸಿ ll ಮಾಯಾ ರಮಣನ ಮೋಹದ ಅರಸಿ ಕಾಯಬೇಕಮ್ಮ ಶ್ರೀ ತುಳಸಿ ll

ಹರಿಯ ಸುಕಂಠದಿ ಸರಸದಿ ಮೆರೆವಳೆ ll ಪರಿಹರಿಸೆನ್ನಯ ಪಾಪಗಳ ll ಹರಿಯ ಷಣ್ಮ ಹಿಷಿಯ ರೊಳಗುತ್ತಮಳು ನೀ ll ಸಿರಿ ಜಾಂಬವತಿ ಎಂದೆನಿಸಿ ಕೊಂಬುವಳೇ ll1ll

ಶೇಷ ಬಲರಾಮರ ಸಮಳೆಂದೆನಿಪಳೆ ll ದೋಷರಾಶಿಗಳ ಕಳೆವವಳೇ ll ಈ ಸಮಯದಲೆನ್ನ ಘಾಸಿ ಗೊಳಿಸದಲೇ ವಾದುದೇವಗೆ ಹೇಳಿ ಪೋಷಿಸು ತಾಯೆ ll2ll

ಶ್ರೀ ಧನ್ವಂತರಿ ಹರ್ಷ ಬಿಂದುಗಳಿಂದ ಈ ಧರೆಯೊಳು ನೀ ತರುವಾಗಿ ll ಊದುಭವಿಸಿಹೆ ಶ್ರೀ ಲಕುಮಿ ಆವೇಷದಿ ಶ್ರೀದ ಶ್ರೀ ನಾಗೇಶ ಶಯನನರ್ದಅಂಗಿ ll3ll

*****

Categories
General

Belagire aaruthiya sri thulasige

ಬೆಳಗಿರೆ ಆರುತಿಯ ಶ್ರೀ ತುಳಸಿಗೆ ll ಬೆಳಗಿರೆ ಆರುತಿಯ llಪ ll ಬೆಳಗಿರೆ ಆರುತಿ ಶ್ರೀ ತುಳಸಿದೇವಿಗೆ ನಿತ್ಯ ಲಲನೆಯರೆಲ್ಲ ಮಂಗಳ ಪಾಡುತ ll ಅ. ಪ ll

ಸುಧೆಯ ಕಲಶದೊಳು ಮಧುವೈರಿ ನಯನದ ಮುದಜಲ ಬೀಳಲು ಉದುಭವಿಸಿದಳೆಂದು ll1ll

ದರುಶನ ಮಾತ್ರದಿ ದುರಿತಗಳೋಡಿಸಿ ll ಸ್ಥಿರವಾದ ಸೌಭಾಗ್ಯ ಕರುಣಿಸುವಳೆಂದು ll2ll

ಇಳೆಯೊಳು ಕಾರ್ಪರನಿಲಯ ಶ್ರೀ ನರಹರಿ ಒಲುಮೆಯ ಪಡೆದ ಶ್ರೀ ತುಳಸಿ ದೇವಿಗೆ ಬೇಗ ll3ll

*****

Categories
General

Toravva tulasi haripada

ತೋರವ್ವ ತುಳಸಿ ಹರಿಪದ ತೋರವ್ವ ತುಳಸಿ ll ಪ ll

ಹದಿನಾರು ಸಾವಿರ ಸುದತೆಯರಿರಲು ll ಮುದದಿ ನಿನ್ನ ಮದುವ್ಯಾದ ಕೃಷ್ಣನನು ll1ll

ಅಷ್ಟ ಮಹಿಷಿಯರು ಶಿಸ್ತಾಗಿರಲು ll ಇಷ್ಟ ದಿಂದ ನಿನ್ನ ಬಿಟ್ಟಿರದವನ ll2ll

ಅಡವಿಯಲಿ ನೀ ಗಿಡವಾಗಿರುತಿರೆ ll ಮಡದಿಯೆಂದು ಕೈ ಪಿಡಿದು ತಂದವನ ll3ll

ಕ್ಷೀರ ಶರಧಿಯಿಂ ತೋರಿದ ಅಮೃತದ ಸಾರ ಬಿಂದು ಎಂದ್ವರಿಸಿದ ಹರಿಯನು ll4ll

ಎದೆಯನು ಲಕ್ಷುಮಿ ಸದನವ ಗೈದಿರೆ ll ಮುದದಿ ನಿನ್ನ ಕಂಠದಲಿ ಧರಿಸಿಹನ ll5ll

ಕಾಯಜಪಿತನ ಉಪಾಯದಿ ಪೊಂದಿದ ll ತೋಯಜಾಕ್ಷಿ ಮಾಯಾಪತಿ ಪಾದವ ll6ll

ಲಕ್ಷುಮಿ ದೇವಿಯ ನಿನ್ನಲಿ ನಿಲಿಸಿದ ll ಅಕ್ಷರಪತಿ ನಾಗೇಶ ಶಯನನು ll7ll

*****

Categories
General

Thulasi deviye namisi beduve

ತುಳಸಿ ದೇವಿಯೇ ನಮಿಸಿ ಬೇಡುವೆ ll ಪ ll ನಿಮ್ಮ ಪಾದ ಒಲುಮೆಯಿಂದ ಭಜಿಸಿ ಪಾಡುವೆ ll ಅ. ಪ ll

ಅಲವ ಭೋದರ ಹೃದಯವಾಸ ll ಸುಲಭ ನಮ್ಮ ಹರಿಯ ರೂಪ ll ಫಲಿಸಿ ಎನ್ನ ಹೃದಯದಲ್ಲಿ ಗೆಲಿಸು ಎನ್ನ ಭವದ ತಾಪ ll 1ll

ಹರಿಯ ನಯನ ಧಾರೆ ಸಂಭವೇ ll ಕಾಯೆ ತಾಯೆ ಸುಜನ ಪ್ರಿಯಳೇ ll ವರಸುವರ್ಣ ಪುಷ್ಪ ದಮಿತ ಎಲ್ಲ ನಮಿಸಿ ಬೇಡಿದಾರು ll ಹರಿಯು ಒಪ್ಪ ನಿಮ್ಮ ದಳ ವಿರಹಿತವಾದ ಪೂಜೆಯನ್ನು ll2ll

ಶ್ರೀ ರಮಣಿ ಆವಿಷ್ಟೆಯೇ ನಮಿಪೆ ತಾಯೆ ಕರುಣಿಸೆನಗೆ ಸುಜನ ಸೇವಿತೇ ll ಗುರುಗಳಂತರ್ಯಾಮಿಯಾದ ಗುರುಗೋವಿಂದವಿಠ್ಠಲನ ll ಚರಣ ವನಜ ತೋರಿ ಎನಗೆ ಹರಿಸು ಎನ್ನ ತ್ರಿವಿಧ ತಾಪ ll3ll

*****

Categories
General

Pooje maadona bannire sri thulasiya

ಪೂಜೆ ಮಾಡೋಣ ಬನ್ನಿರೇ ll ಶ್ರೀ ತುಳಸಿಯ ll ಪೂಜೆ ಮಾಡೋಣ ಬನ್ನಿರೇ ll ಪ ll

ಪೂಜೆ ಮಾಡೋಣ ಬನ್ನಿ ಲಾಜ ದೂರ್ವಗಳಿಂದ ll ಜಾಜಿ ಮಲ್ಲಿಗೆ ರಾಜೀವ ಪುಷ್ಪಗಳಿಂದ ll ಅ. ಪ ll

ಹರದೇ ಶ್ರೀ ತುಳಸಿಗೆ ಸಾರಾವಳಿಯ ಉಡಿಸಿ ll ಹರಿದ್ರ ಕುಂಕುಮ ಗಂಧ ll ಮರುಗ ಮಲ್ಲಿಗೆ ಮುಡಿಸಿ ll 1ll

ಧೂಪಗಳನೆ ಹಾಕಿ ದೀಪವ ಹಚ್ಚಿಟ್ಟು ll ಶ್ರೀ ಪತಿ ಸತಿಗೀಗ ಪಾಕ ನಿವೇದಿಸಿ ll2ll

ತೆಂಗಿನ ಫಲ ಒಡೆದು ರಂಗನ ರಾಣಿಗೆ ll ರಂಗು ಮಾಣಿಕ ತುಂಬಿ ಮಂಗಳಾರುತಿ ಬೆಳಗಿ ll3ll

ಛತ್ರ ಚಾಮರ ವ್ಯಜನ ಪರ್ಯಂಕ ದರ್ಪಣ ll ನೃತ್ಯ ಗಾಯನಗಳ ಅರ್ತಿಯಿಂದಲಿ ಪಾಡಿ ll4ll

ನಾಗೇಶ ಶಯನನ ಭೋಗದ ಸತಿಯೇ ಬಾಗಿ ವಂದಿಸಿ ವರ ಬೇಡುವೆನಮ್ಮ ll 5 ll

*****

Categories
Tulasi

Yelli shri thulasiya vanavu

ಎಲ್ಲಿ ಶ್ರೀ ತುಳಸಿಯ ವನವುll ಅಲ್ಲೋಪ್ಪುವರು ಸಿರಿ ನಾರಾಯಣರು llಪ ll

ಗಂಗೆ ಯಮುನೆ ಗೋದಾವರಿ ಕಾವೇರಿ ll ಕಂಗೊ ಳಿಸುವ ಮಣಿಕರ್ಣಿಕೆಯು ll ತುಂಗಭದ್ರೆ ಕೃಷ್ಣ ವೇಣಿ ತೀರ್ಥಗಳೆಲ್ಲ ll ಸಂಗಡಿಸುತ ವೃಕ್ಷ ಮೂಲದಲ್ಲಿರುವುವು ll1ll

ಸರಸಿಜ ಭವ ಭವ ಸುರಪ ಪಾವಕ ll ಚಂದಿರ ಸೂರ್ಯ ಮೊದಲಾದವರು ll ಸಿರಿ ರಮಣ ನಾಜ್ಞೆಯಲಿ ಅಗಲದಂತೆ ll ತರು ಮಧ್ಯದಲಿ ನಿತ್ಯ ನೆಲೆಸಿಹರು ll2ll

ಋಗ್ವೇದ ಯಜುರ್ವೇದ ಸಾಮ ಅಥರ್ವಣ ll ಅಗ್ಗಳಿಸುವ ವೇದ ಘೋಷಗಳು ll ಅಗ್ರದಲ್ಲಿರುವುದು ಬೆಟ್ಟದೊಡೆಯನಲ್ಲಿ ll ಶೀಘ್ರದಿ ಒಲಿವ ಶ್ರೀ ಪುರಂದರ ವಿಠ್ಠಲ ll3ll

Categories
General

Naarayana ninna nambide

ನಾರಾಯಣ ನಿನ್ನ ನಂಬಿದೆ ll ಲಕ್ಷ್ಮೀ ನಾರಾಯಣ ನಿನ್ನ ನಂಬಿದೆ ll ಪ ll

ನಾನಾ ಯೋನಿಗಳಿಂದ ಬಂದೆನೋ ll ಮಾನ ತಾಳಲಾರದೆ ಬಲು ನೊಂದೆನೋ ll ದೀನರಕ್ಷಕ ಎನ್ನ ಗತಿ ಮುಂದೇನೋ ll ಮಾನ ದಿಂದಲಿ ಪಾಲಿಸುವಂಥ ದೊರೆ ನೀನು ll1ll

ದಾಸರ ಮನ ಉಲ್ಲಾಸನೆ ಶ್ರೀಶಾ ಆಶ್ರಿತ ಜನರ ಪೋಷನೆ ll ಸಾಸಿರ ಅನಂತ ಮಹಿಮನೆ ಕ್ಲೇಶ ನಾಶ ಮಾಡಿಸೋ ಶ್ರೀನಿವಾಸನೆ ll2ll

ರಂಗ ನಗರ ಉತ್ತುಂಗನೇ ಗಂಗಾ ಜನಕ ll ಗರುಡ ತುರಂಗನೇ ll ಉನ್ನಂತ ಗುಣಗಳ ಅಂತರಂಗನೇ ಅನಂಗನ ಪೆತ್ತ ಶ್ರೀ ರಂಗ ವಿಠ್ಠಲನೇ ll3ll