Author: Rekha Prasad
Sumadhwavijaya kannada kavya
Raamanaamava nene manave
ರಾಮನಾಮವ ನೆನೆ ಮನವೇ ll ಪ ll
ರಾಮ ಎಂದವನೆ ಧನ್ಯನೆಂದು ಶೃತಿತತಿಗಳು ಪೊಗಳುತಿರೆ ll ಅ. ಪ ll
ತರುಣತನದಿ ದಿನ ದಾಟಿತು ಸುಮ್ಮನೆ ಶರೀರದೊಳು ಸ್ವರವಾಡುತಲೇ ತರುಣಿ ಸುತರು ಸಂಸಾರವೆಂಬ ಶರಧಿಯೊಳಗೆ ಮುಳಗಿರದೆ ಮನವೇ ll 1 ll
ಬಗೆಬಗೆ ಜನ್ಮದಿ ಜನಿಸಿದೆ ನಾಳೆಗೆ ಸಿಗುವುದೇ ನಿಜದಿಂ ಈ ಸಮಯ ಮುಗುಧನಾಗಿ ಮತ್ತೆ ಜನಿಸಿ ಬರುವುದು ಸೊಗಸು ಕಾಣುವುದೇ ಛಿ ಮನವೇ ll 2 ll
ಚಿಂತೆಯನೆಲ್ಲ ಒತ್ತಟ್ಟಿಗಿತ್ತು ಅಂತರಂಗದಲಿ ಧ್ಯಾನಿಸುತ ಕಂತುಪಿತ ಕನಕಾದಿಕೇಶವನ ಎಂತಾದರೂ ನೀ ಬಿಡಬೇಡ ಮನವೇ ll3 ll
*****
Yelli nodidaralli raama
ಎಲ್ಲಿ ನೋಡಿದರಲ್ಲಿ ರಾಮ -ಇದ ಬಲ್ಲ ಜಾಣರ ದೇಹದಲಿ ನೋಡಣ್ಣ ll
ಕಣ್ಣೇ ಕಾಮನ ಬೀಜ -ಈ ಕಣ್ಣಿಂದಲೇ ನೋಡು ಮೋಕ್ಷ ಸಾಮ್ರಾಜ್ಯ ಕಣ್ಣಿನ ಮೂರುತಿ ಬಿಗಿದು -ಒಳ ಗಣ್ಣಿಇಂದಲೇನೆ ದೇವರ ನೋಡಣ್ಣ ll1 ll
ಮೂಗೆ ಶ್ವಾಸ ನಿಶ್ವಾಸ -ಈ ಮೂಗಿಂದಲೇ ಕಾಣೋ ಯೋಗ ಸಂನ್ಯಾಸ ಮೂಗನಾದರೆ ವಿಶೇಷ – ಒಳ ಮೂಗಲಿ ನೋಡಣ್ಣ ಲೀಲಾವಿಲಾಸ ll 2 ll
ಕಿವಿಯೇ ಕರ್ಮಕ್ಕೆ ದ್ವಾರ -ಈ ಕಿವಿಯಿಂದಲೇ ಕೇಳೋ ಮೋಕ್ಷದ ಸಾರ ಕಿವಿಯೇ ಕರ್ಮ ಕುಠಾರ -ಒಳ ಗಿವಿಯಲ್ಲಿ ಕಾಣೋ ನಾದದ ಬೇರ ll 3 ll
ಬೊಮ್ಮ ಮಾಡಿದ ತನುಬಿಟ್ಟು -ವಿಶ್ವ ಕರ್ಮನು ಮಾಡಿದ ಬೊಂಬೆಯನಿಟ್ಟು ಸುಮ್ಮನೆ ಕೂಗುಗಳಿಟ್ಟು – ಅದ ನಂಬುವನೆಂಬೋನು ಹೋಹ ಕಂಗೆಟ್ಟು ll4 ll
ರೂಢಿಯೊಳಗೆ ಶುದ್ಧ ಮೂಢ – ಈ ಕಾಡು ಕಲ್ಲುಗಳನ್ನು ನಂಬಲಿ ಬೇಡ ನಾಡಾಡಿ ದೈವಗಳನೆಲ್ಲ – ನಮ್ಮ ಬಡದಾದಿ ಕೇಶವನೊಬ್ಬನೇ ಬಲ್ಲ ll 5 ll
*****
Kaayabekamma sri thulasi
ಕಾಯಬೇಕಮ್ಮ ಶ್ರೀ ತುಳಸಿ ll ಮಾಯಾ ರಮಣನ ಮೋಹದ ಅರಸಿ ಕಾಯಬೇಕಮ್ಮ ಶ್ರೀ ತುಳಸಿ ll
ಹರಿಯ ಸುಕಂಠದಿ ಸರಸದಿ ಮೆರೆವಳೆ ll ಪರಿಹರಿಸೆನ್ನಯ ಪಾಪಗಳ ll ಹರಿಯ ಷಣ್ಮ ಹಿಷಿಯ ರೊಳಗುತ್ತಮಳು ನೀ ll ಸಿರಿ ಜಾಂಬವತಿ ಎಂದೆನಿಸಿ ಕೊಂಬುವಳೇ ll1ll
ಶೇಷ ಬಲರಾಮರ ಸಮಳೆಂದೆನಿಪಳೆ ll ದೋಷರಾಶಿಗಳ ಕಳೆವವಳೇ ll ಈ ಸಮಯದಲೆನ್ನ ಘಾಸಿ ಗೊಳಿಸದಲೇ ವಾದುದೇವಗೆ ಹೇಳಿ ಪೋಷಿಸು ತಾಯೆ ll2ll
ಶ್ರೀ ಧನ್ವಂತರಿ ಹರ್ಷ ಬಿಂದುಗಳಿಂದ ಈ ಧರೆಯೊಳು ನೀ ತರುವಾಗಿ ll ಊದುಭವಿಸಿಹೆ ಶ್ರೀ ಲಕುಮಿ ಆವೇಷದಿ ಶ್ರೀದ ಶ್ರೀ ನಾಗೇಶ ಶಯನನರ್ದಅಂಗಿ ll3ll
*****
Belagire aaruthiya sri thulasige
ಬೆಳಗಿರೆ ಆರುತಿಯ ಶ್ರೀ ತುಳಸಿಗೆ ll ಬೆಳಗಿರೆ ಆರುತಿಯ llಪ ll ಬೆಳಗಿರೆ ಆರುತಿ ಶ್ರೀ ತುಳಸಿದೇವಿಗೆ ನಿತ್ಯ ಲಲನೆಯರೆಲ್ಲ ಮಂಗಳ ಪಾಡುತ ll ಅ. ಪ ll
ಸುಧೆಯ ಕಲಶದೊಳು ಮಧುವೈರಿ ನಯನದ ಮುದಜಲ ಬೀಳಲು ಉದುಭವಿಸಿದಳೆಂದು ll1ll
ದರುಶನ ಮಾತ್ರದಿ ದುರಿತಗಳೋಡಿಸಿ ll ಸ್ಥಿರವಾದ ಸೌಭಾಗ್ಯ ಕರುಣಿಸುವಳೆಂದು ll2ll
ಇಳೆಯೊಳು ಕಾರ್ಪರನಿಲಯ ಶ್ರೀ ನರಹರಿ ಒಲುಮೆಯ ಪಡೆದ ಶ್ರೀ ತುಳಸಿ ದೇವಿಗೆ ಬೇಗ ll3ll
*****
Toravva tulasi haripada
ತೋರವ್ವ ತುಳಸಿ ಹರಿಪದ ತೋರವ್ವ ತುಳಸಿ ll ಪ ll
ಹದಿನಾರು ಸಾವಿರ ಸುದತೆಯರಿರಲು ll ಮುದದಿ ನಿನ್ನ ಮದುವ್ಯಾದ ಕೃಷ್ಣನನು ll1ll
ಅಷ್ಟ ಮಹಿಷಿಯರು ಶಿಸ್ತಾಗಿರಲು ll ಇಷ್ಟ ದಿಂದ ನಿನ್ನ ಬಿಟ್ಟಿರದವನ ll2ll
ಅಡವಿಯಲಿ ನೀ ಗಿಡವಾಗಿರುತಿರೆ ll ಮಡದಿಯೆಂದು ಕೈ ಪಿಡಿದು ತಂದವನ ll3ll
ಕ್ಷೀರ ಶರಧಿಯಿಂ ತೋರಿದ ಅಮೃತದ ಸಾರ ಬಿಂದು ಎಂದ್ವರಿಸಿದ ಹರಿಯನು ll4ll
ಎದೆಯನು ಲಕ್ಷುಮಿ ಸದನವ ಗೈದಿರೆ ll ಮುದದಿ ನಿನ್ನ ಕಂಠದಲಿ ಧರಿಸಿಹನ ll5ll
ಕಾಯಜಪಿತನ ಉಪಾಯದಿ ಪೊಂದಿದ ll ತೋಯಜಾಕ್ಷಿ ಮಾಯಾಪತಿ ಪಾದವ ll6ll
ಲಕ್ಷುಮಿ ದೇವಿಯ ನಿನ್ನಲಿ ನಿಲಿಸಿದ ll ಅಕ್ಷರಪತಿ ನಾಗೇಶ ಶಯನನು ll7ll
*****
Thulasi deviye namisi beduve
ತುಳಸಿ ದೇವಿಯೇ ನಮಿಸಿ ಬೇಡುವೆ ll ಪ ll ನಿಮ್ಮ ಪಾದ ಒಲುಮೆಯಿಂದ ಭಜಿಸಿ ಪಾಡುವೆ ll ಅ. ಪ ll
ಅಲವ ಭೋದರ ಹೃದಯವಾಸ ll ಸುಲಭ ನಮ್ಮ ಹರಿಯ ರೂಪ ll ಫಲಿಸಿ ಎನ್ನ ಹೃದಯದಲ್ಲಿ ಗೆಲಿಸು ಎನ್ನ ಭವದ ತಾಪ ll 1ll
ಹರಿಯ ನಯನ ಧಾರೆ ಸಂಭವೇ ll ಕಾಯೆ ತಾಯೆ ಸುಜನ ಪ್ರಿಯಳೇ ll ವರಸುವರ್ಣ ಪುಷ್ಪ ದಮಿತ ಎಲ್ಲ ನಮಿಸಿ ಬೇಡಿದಾರು ll ಹರಿಯು ಒಪ್ಪ ನಿಮ್ಮ ದಳ ವಿರಹಿತವಾದ ಪೂಜೆಯನ್ನು ll2ll
ಶ್ರೀ ರಮಣಿ ಆವಿಷ್ಟೆಯೇ ನಮಿಪೆ ತಾಯೆ ಕರುಣಿಸೆನಗೆ ಸುಜನ ಸೇವಿತೇ ll ಗುರುಗಳಂತರ್ಯಾಮಿಯಾದ ಗುರುಗೋವಿಂದವಿಠ್ಠಲನ ll ಚರಣ ವನಜ ತೋರಿ ಎನಗೆ ಹರಿಸು ಎನ್ನ ತ್ರಿವಿಧ ತಾಪ ll3ll
*****
Pooje maadona bannire sri thulasiya
ಪೂಜೆ ಮಾಡೋಣ ಬನ್ನಿರೇ ll ಶ್ರೀ ತುಳಸಿಯ ll ಪೂಜೆ ಮಾಡೋಣ ಬನ್ನಿರೇ ll ಪ ll
ಪೂಜೆ ಮಾಡೋಣ ಬನ್ನಿ ಲಾಜ ದೂರ್ವಗಳಿಂದ ll ಜಾಜಿ ಮಲ್ಲಿಗೆ ರಾಜೀವ ಪುಷ್ಪಗಳಿಂದ ll ಅ. ಪ ll
ಹರದೇ ಶ್ರೀ ತುಳಸಿಗೆ ಸಾರಾವಳಿಯ ಉಡಿಸಿ ll ಹರಿದ್ರ ಕುಂಕುಮ ಗಂಧ ll ಮರುಗ ಮಲ್ಲಿಗೆ ಮುಡಿಸಿ ll 1ll
ಧೂಪಗಳನೆ ಹಾಕಿ ದೀಪವ ಹಚ್ಚಿಟ್ಟು ll ಶ್ರೀ ಪತಿ ಸತಿಗೀಗ ಪಾಕ ನಿವೇದಿಸಿ ll2ll
ತೆಂಗಿನ ಫಲ ಒಡೆದು ರಂಗನ ರಾಣಿಗೆ ll ರಂಗು ಮಾಣಿಕ ತುಂಬಿ ಮಂಗಳಾರುತಿ ಬೆಳಗಿ ll3ll
ಛತ್ರ ಚಾಮರ ವ್ಯಜನ ಪರ್ಯಂಕ ದರ್ಪಣ ll ನೃತ್ಯ ಗಾಯನಗಳ ಅರ್ತಿಯಿಂದಲಿ ಪಾಡಿ ll4ll
ನಾಗೇಶ ಶಯನನ ಭೋಗದ ಸತಿಯೇ ಬಾಗಿ ವಂದಿಸಿ ವರ ಬೇಡುವೆನಮ್ಮ ll 5 ll
*****
Yelli shri thulasiya vanavu
ಎಲ್ಲಿ ಶ್ರೀ ತುಳಸಿಯ ವನವುll ಅಲ್ಲೋಪ್ಪುವರು ಸಿರಿ ನಾರಾಯಣರು llಪ ll
ಗಂಗೆ ಯಮುನೆ ಗೋದಾವರಿ ಕಾವೇರಿ ll ಕಂಗೊ ಳಿಸುವ ಮಣಿಕರ್ಣಿಕೆಯು ll ತುಂಗಭದ್ರೆ ಕೃಷ್ಣ ವೇಣಿ ತೀರ್ಥಗಳೆಲ್ಲ ll ಸಂಗಡಿಸುತ ವೃಕ್ಷ ಮೂಲದಲ್ಲಿರುವುವು ll1ll
ಸರಸಿಜ ಭವ ಭವ ಸುರಪ ಪಾವಕ ll ಚಂದಿರ ಸೂರ್ಯ ಮೊದಲಾದವರು ll ಸಿರಿ ರಮಣ ನಾಜ್ಞೆಯಲಿ ಅಗಲದಂತೆ ll ತರು ಮಧ್ಯದಲಿ ನಿತ್ಯ ನೆಲೆಸಿಹರು ll2ll
ಋಗ್ವೇದ ಯಜುರ್ವೇದ ಸಾಮ ಅಥರ್ವಣ ll ಅಗ್ಗಳಿಸುವ ವೇದ ಘೋಷಗಳು ll ಅಗ್ರದಲ್ಲಿರುವುದು ಬೆಟ್ಟದೊಡೆಯನಲ್ಲಿ ll ಶೀಘ್ರದಿ ಒಲಿವ ಶ್ರೀ ಪುರಂದರ ವಿಠ್ಠಲ ll3ll