Categories
General

Bhagavatgeeta Saara – by Vyasarajaru

llಹರೇ ಶ್ರೀನಿವಾಸll
llಶ್ರೀ ವ್ಯಾಸರಾಜರು ರಚಿಸಿದ ಶ್ರೀ ಭಗವದ್ಗೀತಾ ಸಾರll
ಕೇಳಯ್ಯ ಎನ್ನ ಮಾತು ಪಾರ್ಥನೆ ಗೀತಾದಾರ್ಥನೆll
ಕುರುಕ್ಷೇತ್ರದಿ ಎನ್ನವರು ಪಾಂಡವರುl
ಪೇಳೋ ಸಂಜಯ ಏನು ಮಾಡುವರು ಕೂಡಿ l
ಕೇಳಯ್ಯ ಅರಸನೆ ನೋಡಿ ಪಾಂಡವರ ಸೇನಾl
ಮಾತನಾಡಿದ ನಿನ್ನ ಸುತ ದ್ರೋಣ ಗಿಂತುll
ಕೇಳಿದ ಪಾರ್ಥನು ಕುರು ದಂಡ ರಣದಲಿ ಚಂಡ l
ಗಾಂಢೀವ ಕರದಂಡll ಅಚ್ಯುತ ಪಿಡಿ ರಥ ನಡೆ ಮುಂದೆl
ಬಹುತ್ವರದಿಂದl
ನೋಡುವೆ ನೇತ್ರದಿಂದll
ಗುರು ಹಿರಿಯ ಕೂಡ ಯಾಕೆಂದ l
ಯುದ್ಧ ಸಾಕೆಂದುl
ಭಿಕ್ಷವೇ ಸುಖವೆಂದ l
ಕುಂತಿ ಸುತ ಈ ಮಾತು ಉಚಿತಲ್ಲ l
ನಿನಗಿದು ಸಲ್ಲl ಪಿಡಿ ಗಾಂಡೀವ ಬಿಲ್ಲ
ll1ll

ಬಾಲ್ಯ ಯೌವನ ಮುಪ್ಪತನ ದೇಹದಲ್ಲಿl ಇಂಥ ದೇಹಕ್ಕೆ ಮೋಹ ಮತ್ಯಾಕಿಲ್ಲಿl ಕಾಯ್ದು ಕೊಲ್ಲುವ ನಾನು ಇರುತಿರಲು ಇಲ್ಲಿl ಬಿಲ್ಲು ಪಿಡಿದು ಕೀರ್ತಿ ಪಡೆ ಲೋಕದಲ್ಲಿ
ll ಶಸ್ತ್ರದಂಜಿಕೆಯಿಲ್ಲ ಜೀವಕ್ಕೆl ಈ ದೇಹಕ್ಕೆ l ಪಾವಕನ ದಾಹಕ್ಕೆlಉದಕಗಳಿಂದ ವೇದನೆಯಾಕೆ l ಜೀವಕ್ಕೆ ಮಾರುತನ ಶೋಷಕ್ಕೆ ನಿತ್ಯ ಅಭೇದ್ಯ ತಾ ಜೀವನ ಸನಾತನl ವಸ್ತ್ರ ದಾಂಗೆ ಈ ತನುವು ಆದಾವು ಹೋದವು ನಿನಗಯ್ಯ ನನಗಿಲ್ಲಯ್ಯ l ಅದನಾ ಬಲ್ಲೆನಯ್ಯಾ

ll 2 ll

ಜ್ಞಾನ ದೊಡ್ಡದು ಕರ್ಮ ಬಂಧನವ ಬಿಟ್ಟು ಕರ್ಮ ಬಿಟ್ಟರೆ ಪ್ರತ್ಯವಾಯವದೆಷ್ಟು l ಫಲ ಬಿಟ್ಟು ನೀ ಮಾಡು ಸತ್ಕರ್ಮಗಳ ಸಮ ದೇಹಕೆ ಫಲ ಕರ್ಮ ಕಾರಣವಲ್ಲll
ಕರ್ಮದಲ್ಲೇ ನಿನಗಧಿಕಾರ ಫಲ ತಾ ದೂರ l ಧನಂಜಯ ಗೋಸ್ಕರ l ಜ್ಞಾನ ದೊಡ್ಡದು ಕರ್ಮ ದೂರಯ್ಯ ಇತ್ತ ಬಾರಯ್ಯ l ಯೋಗಬುದ್ಧಿ ಮಾಡಯ್ಯ l ಜಿತ ಬುದ್ದಿ ಯಾವುದೈ ಕೇಶವ ಜಗತ್ಪಾಶವ l ನೋಡದೇ ಪರಮೇಶ ಗೋವಿಂದನಲಿ ಮನವಿಟ್ಟವ ಕಾಮ ಬಿಟ್ಟವ ಜಿತ ದೇಹ ತಾ ನಾದ

ll 3 ll

ಜ್ಞಾನ ದೊಡ್ಡದು ಕರ್ಮದಲ್ಯಾಕೆ ಎನ್ನ ಬುದ್ದಿ ಮೋಹಿಸಿ ಕೃಷ್ಣ ಕೇಳಯ್ಯ ಎನ್ನ ಬಿನ್ನಪ ll ಕರ್ಮ ವಿಲ್ಲದೆ ಮೋಕ್ಷ ಉಂಟೆ ಇನ್ನು ಕರ್ಮ ಮೋಕ್ಷದ ಬುದ್ಧಿಗೆ ಬೀಜ ವಲ್ಲೇ ll ಯುದ್ಧ ಕರ್ಮವ ಮಾಡೋ ಪಾಂಡವ ರಣ ತಾಂಡವ l ವೈರಿ ಷಂಡನೆಂಬುವ l ಜನರೆಲ್ಲ ಮಾಲ್ಪರೋ ನಿನ್ನ ನೋಡಿ l ಮತ್ತೆನ್ನ ನೋಡಿ l ನೋಡಿದರ ನೀ ಬೇಡಿ l ಏನಗ್ಯಾಕೆ ಪೇಳಯ್ಯ ಜನಕರ್ಮ ಕ್ಷತ್ರಿಯ ಧರ್ಮ l ನಷ್ಟವಾಗುವುದು ಧರ್ಮ l ಅರ್ಪಿಸು ಎನ್ನಲಿ ಸರ್ವವೂ ಬಿಟ್ಟು ಗರ್ವವು l ತಿಳಿ ಎನ್ನಲಿ ಸರ್ವವೂ

ll 4 ll

ಯೋಗ ಸನ್ಯಾಸ ಎರಡು ಮುಕ್ತಿಗೆ ಧೃಡವು l ಭೋಗವರ್ಜಿತ ಕೇಳು ಸನ್ಯಾಸಿ ಇರುವ l ಹೇಗೆ ಪದ್ಮಕೆ ವಾರಿಯ ಲೇಪವಿಲ್ಲ ಹಾಗೆ ಭಕ್ತಿಗೆ ಸಂಸ್ಕೃತಿಯು ಇಲ್ಲ ll
ಅಜನಲ್ಲಿ ದ್ವಿಜನಲ್ಲಿ ಗಜದಲ್ಲಿ ಸಮ ನಾನಲ್ಲಿ l ಭಜಿಪರ ಮನದಲ್ಲಿ ಮನಸ್ಸು ಯಾರ ಜೀವಕೆ ಬಂದು ಇತ್ತ ಬಾರೆಂದು l ಮತ್ತೆ ವೈರಿ ದಾರೆಂದು l ಲೊಷ್ಟ ಕಾಂಚನ ನೋಡು ಸಮ ಮಾಡಿ l ಆಸನ ಹೂಡಿ l ನಾಸಿಕ ತುದಿ ನೋಡಿ ಧ್ಯಾನ ಮಾಡು ಹರಿ ಅಲ್ಲಿಹ ಅವನಲ್ಲಿಹ l ಯೋಗ ಸನ್ನಿಹಿತನವನೇ

ll 5 ll

ಯಾರ ಭಕ್ತಿಯು ಎನ್ನ ಪಾದಾಬ್ಜದಲ್ಲಿ . ಘೋರ ಸಂಸಾರ ಯಾತನೆ ಅವರಿಗೆಲ್ಲಿl ಶರೀರವೇ ಕ್ಷೇತ್ರವೆಂದು ತಿಳಿಯೋ ಮರೆಯದೆ ಕ್ಷೇತ್ರಜ್ಞನೆಂದೆನ್ನ ತಿಳಿಯೋll
ಶರೀರದೊಳಗಿದ್ದು ಪಾಪಿಲ್ಲl ದುಃಖ ಲೇಪಿಲ್ಲ l ಆಕಾಶವು ಎಲ್ಲಾ l ಯಾತರಿಂದ್ಹುಟ್ಟಿತು ಈ ಗುಣ ಮೂರು ಸದ್ಗುಣl ಕೇಳಯ್ಯ ಪಲ್ಗುಣl ಸುಖ-ದುಃಖ ಸಮ ಮಾಡಿ ನೋಡು ನೀ l ಬ್ರಹ್ಮನ ನೋಡು ನೀ l ಸೂರ್ಯ-ಚಂದ್ರರ ತೇಜ ನನದಯ್ಯಾ ಗುಡಾಕೇಶಯ್ಯ l ಅನ್ನ ಪಚನ ನನ್ನದಯ್ಯಾ

ll6ll ll

ನಾನೇ ಉತ್ತಮ, ಮನಸ್ಸು ಎನ್ನಲಿ ಮಾಡೊ l ಜ್ಞಾನ ಅಜ್ಞಾನ ಪೇಳುವೆ ತಿಳಿದು ನೋಡೋ ಜ್ಞಾನ ದುರ್ಲಭ ಅವರ ಭಕ್ತಿ ಗಳಂತೆ ನಾನು ಕೊಡುವೆನು ಫಲವ ಮನಸ್ಸು ಬಂದಂತೆll
ಸ್ಮರಣೆ ಮಾಡುತ್ತ ದೇಹ ಬಿಡುವರೋ ನನ್ನ ಪಡೆವರೋ ಬಲು ಭಕ್ತಿ ಮಾಡುವರೋ ಅನಂತ ಚೇತನ ಸುಳಿವೆನು ಹರಿ ಸುಲಭನೋ l ಮತ್ತೆ ಜನನ ವಿಲ್ಲವಗೆ l ಎನ್ನ ಭಕ್ತರಿಗಿಲ್ಲ ನಾಶವು ಸ್ವರ್ಗದಾಶವು l ಬಿಟ್ಟು ಚರಣ ಭಕುತಿಯ

ll7 ll

ಕೃಷ್ಣ ತೋರಿಸು ನಿನ್ನ ವಿಭೂತಿ ರೂಪ l ಇಷ್ಟ ಪೂರ್ತಿಯಾಗಲು ಎನಗೆ ಶ್ರೀಪ l ರಾಮ ನಾನಯ್ಯ ರಾಜರ ಗುಂಪಿನಲ್ಲಿ l ಸೋಮ ನಾನಯ್ಯ ತಾರಕಮಂಡಲದಲಿ ll
ಅಕ್ಷರ ದೊಳಗೆ ಅ ಕಾರನು ಗುಣಸಾರನು l ಪಕ್ಷಿಗಳಲ್ಲಿ ನಾನು ಗರುಡನುl ಸಕಲ ಜಾತಿಗಳಲ್ಲಿ ಶ್ರೇಷ್ಟತನದಲ್ಲಿ l ಎನ್ನ ರೂಪ ತಿಳಿ ಅಲ್ಲಿ l ತೋರಿಸುವ ಶ್ರೀಕೃಷ್ಣ ನಿನ್ನ ರೂಪ l ಅರ್ಜುನ ನೋಡೋ ರೂಪ l ಕಂಡನು ತನ್ನನ್ನು ಸಹಿತದಿ ಹರಿ ದೇಹದಿ l ಬ್ರಹ್ಮಾಂಡಗಳಲ್ಲಿl

ll 8 ll

ಕ್ಷರ ಅಕ್ಷರ ಎರಡಕ್ಕೂ ಉತ್ತಮನು ನಾನು l ಘೋರ ನರಕದ ಲೋಭ ಕಾಮನು ನಾನು l ಸಾರ ದಾನವು ಸಜ್ಜನರ ಹಸ್ತದಲ್ಲಿ l ಭೂರಿ ದಕ್ಷಿಣೆ ನೀಡೋ ಸತ್ಪಾತ್ರರಲ್ಲಿll l
ಸರ್ವ ದಾನದಕ್ಕಿಂತ ಏನ ಭಕ್ತಿ ಕೇಳೋ ಭೂಶಕ್ತಿ l ಮಾಡಯ್ಯ ವಿರಕ್ತಿ l ಕೃಷ್ಣ ಹರಣವಾಯಿತು ನಿನ್ನಿಂದ ಮೋಹ ಎನ್ನಿಂದl ಬಹು ಸುವಾಕ್ಯದಿಂದ l ಕೃಷ್ಣಭೀಮಾನುಜರ ಸಂವಾದ ಮಹ ಸುಖಪ್ರದ l ದೃತರಾಷ್ಟ್ರ ಕೇಳಿದ l ಬಲ್ಲೆನೋ ವ್ಯಾಸರ ದಯದಿಂದ ಮನಸ್ಸಿನಿಂದ ಕೃಷ್ಣ ನಲ್ಲೆ ಜಯವೆಂದು

ll 9 ll

ll ಕೃಷ್ಣಾರ್ಪಣಮಸ್ತು ll

Leave a Reply

Your email address will not be published. Required fields are marked *